ಶಿಸ್ತು ಇದ್ದಲ್ಲಿ

ಶಿಸ್ತು ಶಾಸ್ತ್ರದ ಶಿಷ್ಯವೃತ್ತಿಗೆ ತನ್ನಕೊಟ್ಟು,
ಹೃದಯ ಗುರುವಿನ ಶಿಕ್ಷೆಗೆ ತಲೆಕೊಟ್ಟು,
ಬಯಲುದಾರಿಯುದ್ದ ಮುನ್ನಡೆಯ ಕಕ್ಷೆ ವಿಧಿಸಿಟ್ಟು
ನಡೆದರೆ ಶಿಸ್ತು ಮುನ್ನಡೆಸುವುದು ಕೈಹಿಡಿದು.

ಶಿಸ್ತು ಇದ್ದಲ್ಲಿ ಮನಸು ಮೊನಚಾಗುವುದು,
ಶಿಸ್ತು ಬಂದಲ್ಲಿ ದೇಹ ಜಡತೆ ಮರೆಯುವುದು,
ದೇಹ ಮನಸ್ಸು ಕೂಡಿ ಮುಂದುವರೆಯುವುವು,
ಬಾಹ್ಯಾಂತರ್ಯಗಳು ಶ್ರುತಿಯಿಟ್ಟು ಹಾಡುವುವು,

ಹೃದಯದಾಳದಿ ಬರುವ ಭಾವದೊತ್ತಡ ಶಿಸ್ತು,
ಬಾಹ್ಯದೊತ್ತಡದಿಂದ ಮೈಗೂಡಿಸಿದವಲ್ಲ;
ಅಂತ: ಶ್ಶಕ್ತಿಯ ಹಿಡಿತ ಕಡಿವಾಣ ಹಿಡಿದಾಗ
ಶಿಸ್ತು ತಪಸ್ಸಾಗಿ ತಂತಾನೆ ಬಿಗಿಗೊಳ್ಳುವುದು.

by Praveen Kumar in Bhavana

Comments (0)

There is no comment submitted by members.