ಸಂಬಂಧಗಳು

ಸಂಬಂಧಗಳ ಕೊಂಡಿ ಬೆಳೆಯುತ್ತಿದೆ ಉದ್ದ,
ನಿನ್ನ ಹೃದಯ ಕುಲುಮೆುಂದ;
ಅಗ್ಗ್ಠಿಕೆಯ ಕುದಿಪ ತಣಿಯುತಿದೆ
ನಿನ್ನ ಕೊಂಡಿ ಬಿಚ್ಚಿಕೊಂಡು;
ಭಾವದೊತ್ತಡದ ಬಿರುಗಾಳಿ ತಂಗಾಳಿಯಾಗಿ
ಈಗ ಕಾವು ಏರುವುದಿಲ್ಲ,
ಬೆವರು ಮೈ ಬಸಿದು ಹೊರಬರುವುದಿಲ್ಲ,
ಶಿವತಾಂಡವ ಮುಗಿದು, ನಡೆದಿದೆ ಸೌಮ್ಯ ಭರತ ನಾಟ್ಯ;
ಹಿಂದೆ ತಿರುಗಿದಾಗ ತುತ್ತ ತುದಿಯಲಿ ನೀನು
ಭಾವ ಪ್ರವಾಹವನೆಬ್ಬಿಸುವೆ ಇನ್ನೂ,
ಕರಗಿಸಿ ಇಬ್ಬನಿ ಮಂಜು,
ಮೂಡಿಸುವೆ ಹಿತದ ಕಾಮನ ಬಿಲ್ಲು;
ಇಲ್ಲಿ ನೆಲ ನಡುಗಿಸುವ ಭೂ ಕಂಪನವಿಲ್ಲ,
ಹೃದಯ ಹಿಂಡುವ ಕಂಬನಿ ಇಲ್ಲ,
ಕಣ್ಣು ಕುಕ್ಕುವ, ಸುಡುವ ಶುಭ್ರ ಬಿಳುಪಿನ ಬಿಸಿಲೂ ಇಲ್ಲ,
ಬರೆ ಬಣ್ಣಗಳ ಲೋಕ,
ಬೆಳಕು ವಿಚ್ಛೇದನದ ಸುಂದರ ಲೋಕ,
ಕಾಲಚೌಕಟ್ಟಿನ ಹೊರ ನಿಂತ ವಿಹಂಗಮ ನೋಟ;
ಇಲ್ಲಿ ಕಲ್ಲುಮುಳ್ಳುಗಳಿಲ್ಲ,
ಸೋಸಿದ ಹಿತ ಕನಸುಗಳು ಮಾತ್ರ,
ನೆಲದಲಿ ಹೂತ ಬೇರುಗಳ ಮೇಲಿನ ಹೂ ಹಣ್ಣುಗಳ ರೂಪ.

ನಿನ್ನ ಪಿಸು ಮಾತು ಕಾಲಕಾಳದಿ ಎದ್ದು
ಹಿತ ಸಮಶೀತೋಷ್ಣದಿ ಬಿಚ್ಚುತ್ತದೆ ಗಂಟು;
ಇದು ಬರೆ ಪ್ರತಿಫಲನ,
ಕನ್ನಡಿಯೊಳಗಿನ ನಂಟು,
ಮೇಳವಿಲ್ಲದ ಸಂಗೀತ,
ಸರಸ ಕಾಣದ ಸಾಹಿತ್ಯ,
ಹೃದಯ ಭಿತ್ತಿಯ ಮೇಲೆ ಅರೆ ಮನಸಿನ ಮೋಜಾಟ,
ಹೃದಯ ತಟ್ಟುವುದಿಲ್ಲ,
ಭಾವಾಘಾತ ಬೆಳಕುಗಳಿಲ್ಲ.

ಸೂರ್ಯ ಚಂದಿರರೆಂದೂ ಸಮಾನರಾಗುವುದುಂಟೆ?
ಸೂರ್ಯನಡಗಿರುವಾಗ ಚಂದ್ರಮನದೆ ಪಾರುಪತ್ಯ,
ಹಿಂದಿನದು ಹಿಂದೆ, ಬರೆ ನೆನಪು, ಇಂದಿನದೆ ಸತ್ಯ,
ಹಿಂದಿನದನು ಹೀರಿ, ಕಟ್ಟಿ, ಕೊಡಬೇಕು ಮುಂದೆ;
ಇದು ಕಾಲ ಸಮಗ್ರತೆ ಸೂತ್ರ,
ವಿಶ್ವ ಮಾನವ ಮಂತ್ರ;
ಭಾವ ಸೇತುಮೆಂದ ಕಾಲತಟಗಳ ಬಿಗಿದು
ನಾಳೆಗಳ ಕಟ್ಟಿ, ಜೀವದೊರತೆಯುಕ್ಕಿಸಬೇಕು;
ಸಂಬಂಧಗಳ ಕೊಂಡಿಯಲಿ ನವರತ್ನ ಪದಕ ನೀನು,
ಸದಾ ಮರೆಯಲಿ ನಿಂತು
ಈ ಹೋರಾಟ ನೋಡುತ್ತಿರುವೆ ಏನು?

by Praveen Kumar in Bhavana

Comments (0)

There is no comment submitted by members.